ಸಿಂದಗಿ ಬೈಪಾಸ್ ನಲ್ಲಿ 2.93 ಕೋಟಿ ಜಪ್ತಿ

319

ಪ್ರಜಾಸ್ತ್ರ ಸುದ್ದಿ  

ವಿಜಯಪುರ: ಟೊಯೋಟಾ ಕಾರಿನಲ್ಲಿ ಹೈದ್ರಾಬಾದ್ ನಿಂದ ಹುಬ್ಬಳ್ಳಿಗೆ ಸಾಗಿಸುತ್ತಿದ್ದ 2.93 ಕೋಟಿ ರೂಪಾಯಿಯನ್ನು ವಿಜಯಪುರ ಸಿಇಎನ್ ಪೊಲೀಸರು ಸೋಮವಾರ ರಾತ್ರಿ ನಗರದ ಸಿಂದಗಿ ಬೈಪಾಸ್ ನಲ್ಲಿ ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ನೋಂದಣಿ ಹೊಂದಿರುವ ಕಾರಿನಲ್ಲಿ 2 ಕೋಟಿ 93 ಲಕ್ಷದ 50 ಸಾವಿರ ರೂಪಾಯಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸಿಇಎನ್ ಠಾಣೆ ಪಿಎಸ್ಐ ಸುನೀಲ್ ಕುಮಾರ್ ನಂದೇಶ್ವರ ತಂಡ ಕಾರು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಬಂಧಿತರಿಂದ ಟೊಯೋಟಾ ಕಾರು, ಎರಡು ಮೊಬೈಲ್ ಸಹ ವಶಕ್ಕೆ ಪಡೆಯಲಾಗಿದೆ.

ಸಾಂಗ್ಲಿ ಮೂಲದ ಬಾಲಾಜಿ ನಿಕ್ಕಂ, ಸಚಿನ್ ಮೊಹಿತೆ ಅನ್ನೋ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!