ಸಂಬರಗಿ ವಿರುದ್ಧ ಜಮೀರ ದೂರು

272

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಹಾಗೂ ಶಾಸಕ ಜಮೀರ ಅಹ್ಮದ ಶ್ರೀಲಂಕಾದ ಕ್ಯಾಸಿನೋದಲ್ಲಿದ್ದರು ಎಂದು ಪ್ರಶಾಂತ ಸಂಬರಗಿ ಎಂಬುವರು ಆರೋಪಿಸಿದ್ರು. ಈ ಸಂಬಂಧ ನಟಿ ಹಾಗೂ ಸಂಬರಗಿ ನಡುವೆ ವಾಕ್ಸಮರ ನಡೆದಿದೆ.

ಇದೀಗ ಶಾಸಕ ಜಮೀರ ಅಹ್ಮದ, ಸಂಬರಗಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಧಾರ ರಹಿತವಾಗಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿ ಶಾಸಕ ಜಮೀರ ಅಹ್ಮದ ಕೇಸ್ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!