ಆನ್ಲೈನ್ ನಲ್ಲಿ ವೈನ್ ಆರ್ಡರ್ ಮಾಡಿ 1.5 ಲಕ್ಷ ಕಳೆದುಕೊಂಡ್ಳು!

260

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇವತ್ತು ಎಲ್ಲವೂ ಆನ್ಲೈನ್ ಜಮಾನಾ. ಏನೇ ಖರೀದಿ ಮಾಡಬೇಕೆಂದರೂ ಆನ್ಲೈನ್ ಮೊರೆ ಹೋಗ್ತಿದ್ದಾರೆ. ವೈಟ್ ಫೀಲ್ಡ್ ಏರಿಯಾದ 25 ವರ್ಷದ ಮಹಿಳೆಯೊಬ್ಬರು ಆನ್ಲೈನ್ ಮೂಲಕ ವೈನ್ ಆರ್ಡರ್ ಮಾಡಿ 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಕಳೆದ ಮಾರ್ಚ್ 24ರಂದು ಆನ್ಲೈನ್ ಮೂಲಕ ಡ್ರಿಂಕ್ಸ್ ಡೆಲಿವರಿ ಮಾಡುವ ಮಳಿಗೆಗಳನ್ನ ಸರ್ಚ್ ಮಾಡಿದ್ದಾಳೆ. ಅದರಂತೆ ರಣವೀರ್ ಸಿಂಗ್ ಅನ್ನೋ ವ್ಯಕ್ತಿಗೆ ಕಾಲ್ ಮಾಡಿದ್ದಾರೆ. ಆ ಕಡೆಯಿಂದ ಕ್ಯೂಆರ್ ಕೋಡ್ ಮೂಲಕ ಅಡ್ವಾನ್ಸ್ ಹಣ ಪಾವತಿಸಿ, ನಿಮ್ಮ ಮನೆಗೆ ವೈನ್ ಬರುತ್ತೆ ಎಂದಿದ್ದಾನೆ.

ಆ ಕಡೆ ವ್ಯಕ್ತಿಯ ಮಾತು ಕೇಳಿದ ಆಂಚಲ್ ಖಂಡೇಲ್ವಾಲ್ ವ್ಯವಹಾರ ನಡೆಸಿದ್ದಾಳೆ. ಅವನು ಹಣ ಬಂದಿಲ್ಲವೆಂದು ಹೇಳಿ ಐದು ಬಾರಿ ವ್ಯವಹಾರ ನಡೆಸಿದ್ದಾನೆ. ಈ ಆನ್ಲೈನ್ ವ್ಯವಹಾರದಲ್ಲಿ 1,59,595 ರೂಪಾಯಿ ಕಳೆದುಕೊಂಡಿದ್ದಾಳೆ. ಒಂದು ವಾರದ ಬಳಿಕವೂ ತನ್ಗೆ ಯಾವುದೇ ವೈನ್ ತಲುಪಿಲ್ಲವೆಂದು ಹೇಳಿ ಸಿಇಎನ್ ಪೊಲೀಸರನ್ನ ಸಂಪರ್ಕಿಸಿದ್ದಾಳೆ. ವ್ಯವಹಾರದ ಟೈಂನಲ್ಲೇ 100 ನಂಬರ್ ಗೆ ಡಯಲ್ ಮಾಡಿದ್ರೆ ಆತನ ಬ್ಯಾಂಕ್ ಅಕೌಂಟ್ ಸ್ಥಗಿತಗೊಳಿಸಬಹುದಿತ್ತು. ಒಂದು ವಾರದ ಮೇಲೆ ಬಂದಿರುವುದ್ರಿಂದ ಏನು ಮಾಡಲು ಬರುವುದಿಲ್ಲವೆಂದಿದ್ದಾರೆ. ಇದರಿಂದಾಗಿ ಆಂಚಲ್ ಖಂಡೇಲ್ವಾಲ್ ಇಂಗು ತಿಂದ ಮಂಗವಾಗಿದ್ದಾಳೆ.




Leave a Reply

Your email address will not be published. Required fields are marked *

error: Content is protected !!