ಹೈವೋಲ್ಟೇಜ್ ಮ್ಯಾಚ್: ಧೋನಿ ಟೀಂಗೆ 170 ಟಾರ್ಗೆಟ್ ನೀಡಿದ ಕೊಹ್ಲಿ

228

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ ನಡುವಿನ ಹೈವೋಲ್ಟೇಜ್ ಪಂದ್ಯ ಎರಡು ಕಡೆಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಟಾಸ್ ಗೆದ್ದ ಬ್ಯಟಿಂಗ್ ಆಯ್ಕೆ ಮಾಡಿಕೊಂಡ ವಿರಾಟ ಕೊಹ್ಲಿ ಲೆಕ್ಕಾಚಾರವನ್ನ ಪಿಂಚ್, ಎಬಿಡಿ ಒಂದಿಷ್ಟು ಉಲ್ಟಾ ಮಾಡಿದ್ರು.

ಅದ್ಭುತ ಫಾರ್ಮ್ ನಲ್ಲಿ ಪಡಿಕಲ್ 33 ರನ್ ಬಾರಿಸಿದ್ರೆ, ಪಿಂಚ್ ಕೇವಲ 2 ಹಾಗೂ ಎಬಿಡಿ ಶೂನ್ಯಕ್ಕೆ ಔಟ್ ಆಗಿ ಹೋದ್ರು. ವಾಷಿಂಗ್ಟನ್ ಸುಂದರ ಸಹ ಕೇವಲ 10 ರನ್ ಬಾರಿಸಿದ. ಇತ್ತ ಕ್ಯಾಪ್ಟನ್ ಕೊಹ್ಲಿ ಒಂದು ಕಡೆ ನಿಂತು ಅರ್ಧ ಶತಕ ಪೂರೈಸಿದ.

ಕ್ಯಾಪ್ಟನ್ ಕೊಹ್ಲಿ ಭರ್ಜರಿ 90 ರನ್ ಬಾರಿಸಿದ. ಇದರಲ್ಲಿ 4 ಫೋರ್ ಹಾಗೂ 4 ಸಿಕ್ಸ್ ಗಳಿದ್ವು. ಇನ್ನು ಶಿವಂ ದುಬೆ 22 ರನ್ ಬಾರಿಸಿ ಇವರಿಬ್ಬರು ನಾಟ್ ಔಟ್ ಆಗಿ ಉಳಿದ್ರು. ಅಂತಿಮವಾಗಿ 20 ಓವರ್ ಗಳಲ್ಲಿ 169 ರನ್ ಬಾರಿಸಿ 170 ರನ್ ಟಾರ್ಗೆಟ್ ನೀಡಿತು.

ಚೆನ್ನೈ ಪರ ಶಾರ್ದೂಲ್ ಠಾಕೂರ್ 2, ಚಾಹರ್ ಹಾಗೂ ಕರನ್ ತಲಾ 1 ವಿಕೆಟ್ ಪಡೆದು ಮಿಂಚಿದ್ರು.




Leave a Reply

Your email address will not be published. Required fields are marked *

error: Content is protected !!