ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ

278

ಪ್ರಜಾಸ್ತ್ರ ಸುದ್ದಿ

ಅಂಜಾವ್: ಅರುಣಾಚಲ ಪದ್ರದೇಶದ ಅಂಜಾವ್ ನಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದೆ. ಬೆಳಗ್ಗೆ 3.36ರ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಸ್ಕೇಲ್ ನಲ್ಲಿ 3.7 ತೀವ್ರತೆಯ ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೇಂದ್ರದ ಭೂಕಂಪಶಾಸ್ತ್ರ ಸಂಸ್ಥೆ ಟ್ವೀಟ್ ಮಾಡಿದ್ದು, 3.7ರಷ್ಟು ತೀವ್ರತೆಯ ಭೂಕಂಪನ ಆಗಸ್ಟ್ 24, 03:36:12ಕ್ಕೆ ಸಂಭವಿಸಿದೆ ಎಂದಿದೆ. ಇದೆ ರೀತಿಯ ಚಾಂಗ್ಲಾಂಗ್ ನ ಇಎಸ್ಇನಲ್ಲಿಯೂ ಭೂಕಂಪನ ಸಂಭವಿಸಿದೆ. ಇದರಲ್ಲಿ ಯಾವುದೇ ಅಪಾಯ ಆಗಿಲ್ಲವೆಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!