ಆರ್ ಸಿಬಿ ಕಪ್ ಎತ್ತಲು ಇನ್ನೊಂದೆ ಮೆಟ್ಟಿಲು..

119

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೊದಲ ಬಾರಿಗೆ ಫೈನಲ್ ತಲುಪಿದೆ. ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸ್ಮೃತಿ ಮಂದಾನ ಟೀಂ ರೋಚಕ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 136 ರನ್ ಗಳಿ ಅಲ್ಪ ಗುರಿ ನೀಡಿತ್ತು. ಇದನ್ನು ದಿಟ್ಟವಾಗಿ ಎದುರಿಸಿದ ಮುಂಬೈ ಇಂಡಿಯನ್ಸ್ 17 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ ಗೆಲುವಿನ ಸನೀಹದಲ್ಲಿತ್ತು.

18 ಹಾಗೂ 19ನೇ ಓವರ್ ನಲ್ಲಿ ಕರ್ನಾಟಕ ಮೂಲದ ಆಟಗಾರ್ತಿ ಶ್ರೇಯಾಂಕಾ ಪಾಟೀಲ ಹಾಗೂ ಸೋಫಿ ಮೊಲಿನೆಕ್ಸ್ ಒಂದೊಂದು ವಿಕೆಟ್ ಪಡೆದು 4 ರನ್ ನೀಡಿದರು. ಕೊನೆಯ ಓವರ್ ನಲ್ಲಿ 12 ರನ್ ಗಳು ಬೇಕಿದ್ದವು. ಆಶಾ ಶೋಭನಾ 6 ರನ್ ನೀಡಿ ಪೂಜಾ ವಸ್ತ್ರಾಕರ್ ವಿಕೆಟ್ ಪಡೆಯುವುದರೊಂದಿಗೆ ಆರ್ ಸಿಬಿ 5 ರನ್ ಗಳ ರೋಚಕ ಗೆಲುವು ಕಂಡಿತು. ಇದರೊಂದಿಗೆ ಫೈನಲ್ ಗೆ ಲಗ್ಗೆ ಇಟ್ಟಿತು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಆರ್ ಸಿಬಿ ಕಪ್ ಎತ್ತಿ ಹಿಡಿಯುವುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!