ಬಾಲಿವುಡ್ ನಟ, ನಿರ್ಮಾಪಕ ಆಮೀರ ಖಾನಗೆ ಪ್ರಧಾನಿ ನರೇಂದ್ರ ಮೋದಿ ಥ್ಯಾಂಕ್ಸ್ ಹೇಳಿದ್ದಾರೆ. ಯಾಕಂದ್ರೆ, ಪ್ರಧಾನಿ ಮೋದಿ ಶುರು ಮಾಡಿರುವ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಟ್ವೀಟರ್ ಮೂಲಕ ಪಿಎಂ ಕಾರ್ಯಕ್ಕೆ ಆಮೀರ ಬೆಂಬಲ ಸೂಚಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಟೈಂನಲ್ಲಿ ಪ್ರಧಾನಿ ಮಾಡಿದ ಭಾಷಣದ ವೇಳೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ನಿಯಂತ್ರಿಸಲು ಕರೆ ನೀಡಿದ್ರು. ಗಾಂಧಿ ಅವರು 150ನೇ ಜನ್ಮ ದಿನಾಚರಣೆ ವೇಳೆಯಷ್ಟರಲ್ಲಿ ಪ್ಲಾಸ್ಟಿಕ್ ನಿಂದ ಈ ದೇಶವನ್ನ ಮುಕ್ತ ಮಾಡೋಣವೆಂದು ಅಭಿಯಾನ ಶುರು ಮಾಡಲಾಗಿದೆ. ಇದಕ್ಕೆ ಬೆಂಬಲ ನೀಡಿದ ಆಮೀರ ಖಾನಗೆ ಟ್ವೀಟರ್ ಮೂಲಕ ಪ್ರಧಾನಿ ಮೋದಿ ಥ್ಯಾಂಕ್ ಹೇಳಿದ್ದಾರೆ.