ಬೆಂಗಳೂರು: ಸಂಜೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಮತ್ತೆ 19 ಹೊಸ ಕೇಸ್ ಗಳು ದಾಖಲಾಗಿವೆ. ಈ ಮೂಲಕ ಇಂದು ಒಟ್ಟು 69 ಕರೋನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅಲ್ಲಿಗೆ 1056 ಕೇಸ್ ದಾಖಲಾಗಿವೆ.
ದಕ್ಷಿಣ ಕನ್ನಡ 15, ಮಂಡ್ಯ 13, ಬೆಂಗಳೂರು 11, ಬೀದರ 7, ಹಾಸನ 4, ಉಡುಪಿ 4, ಕಲಬುರಗಿ 3, ಚಿತ್ರದುರ್ಗ 2, ಶಿವಮೊಗ್ಗ 1, ಕೋಲಾರ 1, ಉತ್ತರ ಕನ್ನಡ 1 ಹೀಗೆ ಒಟ್ಟು ಇಂದು 69 ಕೇಸ್ ದಾಖಲಾಗಿವೆ. 539 ಕೇಸ್ ಚಾಲ್ತಿಯಲ್ಲಿವೆ. 480 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 35 ಮಂದಿ ಸಾವನ್ನಪ್ಪಿದ್ದಾರೆ.