ನಾಳೆ ಪುನೀತ್ ಪರ್ವ.. ತಯಾರಿ ಜೋರು

241

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಅವರ ಗಂಧದ ಗುಡಿ ಚಿತ್ರದ ಪ್ರಿ ಇವೆಂಟ್ ಅಕ್ಟೋಬರ್ 21ರಂದು ನಡೆಯುತ್ತಿದೆ. ಅದಕ್ಕೆ ಪುನೀತ್ ಪರ್ವ ಎಂದು ಕರೆಯಲಾಗುತ್ತಿದ್ದು, ಭರ್ಜರಿ ತಯಾರಿ ನಡೆದಿದೆ. ಅಪ್ಪು ಅಭಿಮಾನಿಗಳು ಸೇರಿ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಹಬ್ಬವಾಗಲಿದೆ.

ಅರಮನೆ ಮೈದಾನದಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ಭಾರತೀಯ ಸಿನಿ ರಂಗದ ದಿಗ್ಗಜರು ಸೇರಿದಂತೆ ಯುವ ಸ್ಟಾರ್ ನಟ, ನಟಿಯರು ಭಾಗವಹಿಸಲಿದ್ದಾರೆ. ಅಸಂಖ್ಯಾತ ಅಭಿಮಾನಿಗಳು ಸಹ ಇದರಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಬಹುದೊಡ್ಡ ಕಾರ್ಯಕ್ರಮಕ್ಕೆ ಪುನೀತ್ ಪರ್ವ ಸಾಕ್ಷಿಯಾಗಲಿದೆ.

ಪುನೀತ್ ಅವರ ಪತ್ನಿ ಅಶ್ವಿನಿ ಹಾಗೂ ಸಹೋದರ ರಾಘಣ್ಣ ಸೇರಿ ಇಡೀ ಕುಟುಂಬ, ಅಭಿಮಾನಿಗಳು, ಬೆಂಬಲಿಗರು ಸೇರಿದಂತೆ ಅನೇಕರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಹೃದಯಾಘಾತದಿಂದ ನಿಧನರಾಗಿ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗಲಿದೆ. ಅಕ್ಟೋಬರ್ 28ಕ್ಕೆ ಗಂಧದ ಗುಡಿ ರಿಲೀಸ್ ಆಗಲಿದೆ. ಭೌತಿಕವಾಗಿ ಪುನೀತ್ ಕಣ್ಮರೆಯಾಗಿದ್ದರೂ ಅವರ ಜನಮಾನಸದಲ್ಲಿ ಸದಾ ಇರುತ್ತಾರೆ ಅನ್ನೋದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!