ಆಫ್ರಿಕಾ ವಿರುದ್ಧ ಕೊಹ್ಲಿ ಪಡೆ ವಿಜಯ

478

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೆಂಚುರಿಯನ್: ಸೌಥ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ನೀಡಿದ 305 ರನ್ ಗಳ ಟಾರ್ಗೆಟ್ ಚೇಸ್ ಮಾಡಿದ ಹರಣಿಗಳು 191 ರನ್ ಗಳಿಗೆ ಆಲೌಟ್ ಆದರು.

ಭಾರತದ ಬೌಲರ್ ಗಳ ಎದುರು ಆಫ್ರಿಕಾ ಬ್ಯಾಟ್ಸಮನ್ ಗಳು ಶರಣಾದರು. ಎಲ್ಗರ್ 77 ರನ್ ಹಾಗೂ ಬುವುಮಾ 36 ರನ್ ಹೊರತು ಪಡಿಸಿ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಕೊಹ್ಲಿ ಪಡೆ 113 ರನ್ ಗಳ ಅಂತರದಿಂದ ವಿಜಯ ಸಾಧಿಸಿತು.

ಶೆಮಿ ಹಾಗೂ ಬೂಮ್ರಾ ತಲಾ 3 ವಿಕೆಟ್ ಪಡೆದರು. ಸ್ಪೀನ್ ಮಾಂತ್ರಿಕ ಅಶ್ವಿನ್ 2 ವಿಕೆಟ್ ಪಡೆದು ಮಿಂಚಿದರು.




Leave a Reply

Your email address will not be published. Required fields are marked *

error: Content is protected !!