ಕಿವೀಸ್ ವಿರುದ್ಧ ಸರಣಿ: ನಾಳೆ ಟೀಂ ಪ್ರಕಟ

294

ನ್ಯೂಜಿಲೆಂಡ್ ವಿರುದ್ಧ ಜನವರಿ 24ರಿಂದ ಸರಣಿ ನಡೆಯಲಿದೆ. ಇದಕ್ಕೆ ಟೀಂ ಆಯ್ಕೆ ನಡೆದಿದ್ದು ನಾಳೆ ಅದರ ಬಗ್ಗೆ ಪ್ರಕಟಣೆಯಾಗಲಿದೆ. ಭಾನುವಾರ ಸಭೆ ನಡೆಸಲಿರುವ ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಲಿದೆ.

5 ಟಿ-20 ಪಂದ್ಯ, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. 6 ವಾರಗಳ ಕಾಲ ನಡೆಯುವ ಸರಣಿಗೆ 15 ಸದಸ್ಯರ ಬದಲಿಗೆ 16 ಅಥವ 17 ಜನರನ್ನ ಆಯ್ಕೆ ಮಾಡಬಹುದು ಅಂತಾ ಹೇಳಲಾಗ್ತಿದೆ. ಗಾಯದ ಸಮಸ್ಯೆಯಿಂದ ದೂರ ಉಳದಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.

ಬೆನ್ನು ನೋವಿನಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡೆ ಕೆಲ ತಿಂಗಳು ಟೀಂನಿಂದ ದೂರ ಉಳಿದಿದ್ರು. ಇದೀಗ ನ್ಯೂಜಿಲೆಂಡ್ ವಿರುದ್ಧ ನಡೆಯುವ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಕ್ಯಾಪ್ಟನ್ ಧೋನಿ ಅಂಗಳಕ್ಕೆ ಇಳಿಯುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!