ಆ ಬ್ಯೂಟಿಗಾಗಿ ಸುನಂದಾ-ಶಶಿ ನಡುವೆ ನಿತ್ಯ ಜಗಳ

395

ನವದೆಹಲಿ: ಪಾಕಿಸ್ತಾನದ ಪತ್ರಕರ್ತೆಯ ಸಲುವಾಗಿ ಸಂಸದ ಶಶಿ ತರೂರ್ ಮತ್ತು ಪತ್ನಿ ಸುನಂದಾ ಪುಷ್ಕರ್ ನಡುವೆ ನಿತ್ಯ ಜಗಳ ನಡೆಯಿತಿತ್ತು. ಅದು ದುಬೈನಲ್ಲಿಯೂ ಸಹ ನಡೆದಿತ್ತು. ಇದಕ್ಕೆ ಅವರ ಮನೆಯ ಸೇವಕ ಸಾಕ್ಷಿಯೆಂದು ದೆಹಲಿ ಪೊಲೀಸ್ರು ಕೋರ್ಟ್ ಗೆ ತಿಳಿಸಿದ್ದಾರೆ.

ಶಶಿ ಮತ್ತು ಸುನಂದಾ ನಡುವಿನ ಜಗಳ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು. ಒಮ್ಮೆ ಸುನಂದಾ ಶಶಿ ಮೇಲೆ ಹಲ್ಲೆ ಸಹ ಮಾಡಿದ್ರು ಅಂತಾ ಹೇಳಲಾಗಿದೆ. ಸುನಂದಾ ಸಾವಿನ ಸಂಬಂಧ, ಇದು ಕೊಲೆಯೋ ಆತ್ಮಹತ್ಯೆಯೋ ಯಾವುದರ ಸಂಬಂಧ ಪ್ರಕರಣ ದಾಖಲಿಸಬೇಕೆಂದು ಕೇಳಿದ್ದಾರೆ.

ದುಬೈನಿಂದ ಬಂದ ಬಳಿಕ ಸಹ ಪಾಕ್ ಪತ್ರಕರ್ತೆಯ ಸಲುವಾಗಿ ಜಗಳ ನಡೆದಿತ್ತು. ಸುನಂದಾ ಪುಷ್ಕರ್ ಐಪಿಎಲ್ ಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ರು. ಇದಾದ್ಮೇಲೆ ಅವರು ಸಾವನ್ನಪ್ಪಿದ್ರು. ಅಂದ್ರೆ, ಜನವರಿ 17, 2014ರಂದು ನವದೆಹಲಿಯಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅಂದಿನಿಂದ ಇದು ಆತ್ಮಹತ್ಯೆ ಅಲ್ಲ ಕೊಲೆ ಅನ್ನೋ ಅನುಮಾನ ಮೂಡಿದೆ.




Leave a Reply

Your email address will not be published. Required fields are marked *

error: Content is protected !!