ನಾಳೆ ಹೈಟೆನ್ಷನ್ ಮ್ಯಾಚ್.. 11 ವರ್ಷದ ಬಳಿಕ ಕೊಹ್ಲಿ-ವಿಲಿಯಮ್ಸ್ ಫೈಟ್

430

ಲಂಡನ್: ನಾಳೆ ಐಸಿಸಿ ವರ್ಲ್ಡ್ ಕಪ್ ನ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯಲಿದೆ. ಇಂಡಿಯನ್ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಓಲ್ಡ್ ತ್ರಾಫೋರ್ಡ್ ಕ್ರಿಕೆಟ್ ಮೈದಾನದಲ್ಲಿ ವಿರಾಟ ಕೊಹ್ಲಿ ಪಡೆ ಕೇನ್ ವಿಲಿಯಮ್ಸ್ ಪಡೆಯನ್ನ ಎದುರಿಸಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳಲ್ಲಿ ಉತ್ತಮ ಆಟಗಾರರಿದ್ದು, ಫೈನಲ್ ಪಂದ್ಯದಷ್ಟೇ ಟೆನ್ಷನ್ ಆಗಿದೆ. ಈ ಟೂರ್ನಿಯಲ್ಲಿ ಫುಲ್ ಫಾರ್ಮ್ ನಲ್ಲಿರುವ ರೋಹಿತ ಶರ್ಮಾ ಹಾಗೂ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ಕೆ.ಎಲ್ ರಾಹುಲ ಮತ್ತೊಮ್ಮೆ ತಮ್ಮ ಅಮೋಘ ಆಟವಾಡಲು ರೆಡಿಯಾಗಿದ್ದಾರೆ.

ಕ್ಯಾಪ್ಟನ್ ವಿರಾಟ ಕೊಹ್ಲಿ ತಮ್ಮ ಎಂದಿನ ಸ್ಫೋಟಕ ಆಟವಾಡ್ತಿದ್ದಾರೆ. ಜಾಧವ್ ಸ್ಥಾನಕ್ಕೆ ಬಂದಿರುವ ರಿಷಭ ಪಂಥ ಸಹ ಭರ್ಜರಿಯಾಗಿ ಬ್ಯಾಟ್ ಬೀಸ್ತಿದ್ದು ಮಧ್ಯಮಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ. ಆಲ್ ರೌಂಡರ್ ಹಾರ್ದಿಕ ಪಾಂಡೆ, ಅನುಭವಿ ಎಂ.ಎಸ್ ಧೋನಿ ಆಟ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ಇನ್ನು ಬೌಲಿಂಗ್ ನಲ್ಲಿ ಮಿಂಚುತ್ತಿರುವ ಬೂಮ್ರಾ, ಕಳೆದ ಪಂದ್ಯದಲ್ಲಿ ರೆಸ್ಟ್ ಪಡೆದಿದ್ದ ಮಹ್ಮದ ಶೆಮಿ ನಾಳೆ ಭರ್ಜರಿಯಾಗಿ ಅಟ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಚಾಹಲ್, ಭುವನೇಶ್ವರಕುಮಾರ ಹಾಗೂ ಪಾಂಡೆ ಸಹ ಮಾರಕ ದಾಳಿ ಮಾಡುವ ಮೂಲಕ ನ್ಯೂಜಿಲೆಂಡ್ ತಂಡವನ್ನ ಸೋಲಿಸಲು ರೆಡಿಯಾಗಿದ್ದಾರೆ.

ಇತ್ತ ನ್ಯೂಜಿಲೆಂಡ್ ತಂಡದಲ್ಲಿಯೂ ಸ್ಫೋಟಕ ಆಟಗಾರರಾದ ನಿಕೋಲಸ್, ಕ್ಯಾಪ್ಟನ್ ವಿಲಿಯಮ್ಸ್, ಗುಪ್ಟಿಲ್, ಟೈಲರ್, ಮುನ್ರೋ ಹಾಗೂ ಗ್ರ್ಯಾಂಡ್ ಹೋಮ್ ಅವರ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ. ಬ್ಲೂ ಬಾಯ್ಸ್ ಬೌಲರ್ ಗಳನ್ನ ಎದುರಿಸಲು ಇವರೆಲ್ಲ ಸಿದ್ಧರಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸೌಥಿ, ಬೌಲ್ಟ್, ಹೆನ್ರಿ ಹಾಗೂ ಫ್ರೆಗ್ಯೂ ಸನ್ ದಾಳಿಗೆ ಎಲ್ಲ ರೀತಿಯ ಪ್ಲಾನ್ ಮಾಡಿದ್ದಾರೆ.

ಮಳೆಯಿಂದ ಪಂದ್ಯ ರದ್ದಾದ ಕಾರಣ ಲೀಗ್ ಹಂತದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಟೀಂ ಮುಖಾಮುಖಿಯಾಗಿಲ್ಲ. ಇದೀಗ ಇಬ್ಬರ ನಡುವೆ ಫೈಟ್ ನಡೆಯಲಿದೆ. ವರ್ಲ್ಡ್ ಚಾಂಪಿಯನ್ ಆಗಲು ಎರಡೇ ಮೆಟ್ಟಿಲಿದ್ದು, ನ್ಯೂಜಿಲೆಂಡ್ ಟೀಂನ್ನ ಸೋಲಿಸುವ ಮೂಲಕ ಫೈನಲ್ ತಲುಪುವ ತವಕದಲ್ಲಿ ಭಾರತವಿದೆ. ಇನ್ನು ಮೊದಲ ಬಾರಿಗೆ ಕಪ್ ಎತ್ತಿ ಹಿಡಿಯುವ ಆಸೆಯಲ್ಲಿ ಕೇನ್ ವಿಲಿಯಮ್ಸ್ ಬಳಗ ಅಖಾಡಕ್ಕೆ ಇಳಿಯುತ್ತಿದೆ.

11 ವರ್ಷದ ಬಳಿ ಕೊಹ್ಲಿ-ವಿಲಿಯಮ್ಸ್ ಮಧ್ಯೆ ಫೈಟ್

ಕಳೆದ 11 ವರ್ಷಗಳ ಹಿಂದೆ, ಅಂದ್ರೆ 2008ರಲ್ಲಿ ನಡೆದ ಅಂಡರ್ 19 ವರ್ಲ್ಡ್ ಕಪ್ ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ವು. ಆಗ್ಲೂ ವಿರಾಟ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸ್ ಅವರ ತಂಡದ ನಾಯಕರಾಗಿದ್ರು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 3 ವಿಕೆಟ್ ಗಳಿಂದ ಗೆಲುವು ದಾಖಲಿಸಿತ್ತು. ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12 ರನ್ ಗಳಿಂದ ಗೆದ್ದ ಭಾರತ ಕಪ್ ಮುಡಿಗೇರಿಸಿಕೊಂಡಿದೆ.

ಭಾರತೀಯ ಕಾಲಮಾನದ ಪ್ರಕಾರ ನಾಳೆ ಮಧ್ಯಾಹ್ನ 3ಗಂಟೆಗೆ ಮ್ಯಾಚ್ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!